ಶ್ರೀ ಸಿದ್ದರಾಮಯ್ಯ

ಸನ್ಮಾನ್ಯ ಮುಖ್ಯಮಂತ್ರಿಗಳು

ಕರ್ನಾಟಕ ಸರ್ಕಾರ

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಕರ್ನಾಟಕ ಸರ್ಕಾರ

ಶ್ರೀ ಎನ್.ಎಸ್. ಭೋಸರಾಜು

ಮಾನ್ಯ ಸಣ್ಣ ನೀರಾವರಿ,
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು

ಕರ್ನಾಟಕ ಸರ್ಕಾರ

ಪೋರ್ಟಲ್ ಈಗ ಲೈವ್ ಆಗಿದೆ !! | ಲೋಕೋಪಯೋಗಿ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆಯ ನೌಕರರು ಮಾತ್ರ ತಮ್ಮ ಇಚ್ಛೆಯನ್ನು ಸಲ್ಲಿಸಲು ಅವಕಾಶವಿದೆ. | ನೀವು ಈಗಾಗಲೇ ನಿಮ್ಮ ಆಯ್ಕೆಯನ್ನು ಸಲ್ಲಿಸಿದ್ದರೆ, ನಿಮ್ಮ ಕೆಜಿಐಡಿ ನಮೂದಿಸುವ ಮೂಲಕ ನೀವು ಪರಿಶೀಲಿಸಬಹುದು.

ರಾಜ್ಯದಲ್ಲಿನ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಕಾಮಗಾರಿಗಳ ಯೋಜನೆ ರೂಪಿಸುವುದು, ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆ ಇತ್ಯಾದಿ ಕೆಲಸಗಳನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ನಿರ್ವಹಿಸಲಾಗುತ್ತಿದ್ದು, ಪ್ರತ್ಯೇಕ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸಿ, ಅವಶ್ಯಕ ಸಿಬ್ಬಂದಿಗಳನ್ನು ಇಲಾಖೆಯಿಂದಲೇ ಭರ್ತಿ ಮಾಡಿ ಅಭಿವೃದ್ದಿ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ ನಿರ್ದಿಷ್ಟ ಗುರಿ ಮುಟ್ಟಲು ಅನುವಾಗುವಂತೆ ಅಧಿಸೂಚನೆ ಸಂಖ್ಯೆ : ಸನೀಇ 361 ಎಂಐಎಸ್ ಯು 2023 ದಿನಾಂಕ: 28/05/2025ನ್ನು ಹೊರಡಿಸಲಾಗಿರುತ್ತದೆ.
ಸದರಿ ಅಧಿಸೂಚನೆಯ ನಿಯಮ 2 ರಲ್ಲಿ ಅವಕಾಶ ಕಲ್ಪಿಸಿರುವಂತೆ ಲೋಕೋಪಯೋಗಿ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆಯಿಂದ ನೇಮಕಾತಿ ಹೊಂದಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಲ್ಲಿ ಶಾಶ್ವತವಾಗಿ ವಿಲೀನಾತಿ ಹೊಂದಲು ಆಸಕ್ತಿ ಹೊಂದಿರುವವರು ಅರ್ಜಿ ನಮೂನೆಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ ಸನೀಇ 361 ಎಂಐಎಸ್ ಯು 2023 dated 14/11/2025 ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 45 ದಿನಗಳ ಒಳಗಾಗಿ (ಎಲ್ಲ ರಜೆದಿನಗಳು ಒಳಗೊಂಡಂತೆ) ಭರ್ತಿ ಮಾಡಿ ತಮ್ಮ ಇಚ್ಛೆಯನ್ನು ಸಲ್ಲಿಸತಕ್ಕದ್ದು.

ನಿಮ್ಮ ಮಾಹಿತಿ ಈಗಾಗಲೇ ಭರ್ತಿ ಮಾಡಲಾಗಿದೆಯೇ ಎಂದು ಖಾತ್ರಿ ಮಾಡಿಕೊಳ್ಳಿ -

ವಿಶೇಷ ಸೂಚನೆ:

  • ಪ್ರತಿಯೊಬ್ಬರೂ ಎಲ್ಲಾ ವಿವರಗಳನ್ನು ನಿಗದಿತ ನಮೂನೆಯಲ್ಲಿ ಆನ್ ಲೈನ್ ನಲ್ಲಿ ಸಲ್ಲಿಸತಕ್ಕದ್ದು
  • ಕನ್ನಡ ಮತ್ತು ಇಂಗ್ಲಿಷ್ - ಎರಡೂ ಭಾಷೆಯಲ್ಲಿ ಕಡ್ಡಾಯವಾಗಿ ಭರ್ತಿ ಮಾಡತಕ್ಕದ್ದು . ನುಡಿ 6.0 ಅನ್ನು ಬಳಸಿ. ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
  • ಕನ್ನಡ ಭಾಷೆಯನ್ನು "ಯುನಿಕೋಡ್" ನಲ್ಲೆ ಭರ್ತಿ ಮಾಡಬೇಕಾಗಿದ್ದು, ಅದನ್ನು ಈ ಕೊಂಡಿಯ ಮೂಲಕ ಮಾಡಬಹುದು - ASCII to Unicode
  • ಮೊದಲನೆಯ ಕೆಜಿಐಡಿ ಸಂ., ಸೇವೆಗೆ ಸೇರಿದ ದಿನಾಂಕ, ನೇಮಕಾತಿ ಆದೇಶ ಸಂಖ್ಯೆ, ಆಧಾರ್ ಸಂಖ್ಯೆ, ಪ್ಯಾನ್ ಕಾರ್ಡ್ ಸಂಖ್ಯೆ, ವಿದ್ಯಾರ್ಹತೆ ಕುರಿತ ಮಾಹಿತಿ ಇತ್ಯಾದಿ ವಿವರಗಳನ್ನು ಅರ್ಜಿ ಭರ್ತಿ ಮಾಡಲು ಪ್ರಾರಂಭಿಸುವ ಮೊದಲು ನಿಮ್ಮ ಬಳಿ ಇರಿಸಿಕೊಳ್ಳಿ. ಅದೇ ರೀತಿ ನಿಮ್ಮ ಭಾವಚಿತ್ರ, ಸಹಿಗಳನ್ನು ಸಹ ಸಿದ್ಧಮಾಡಿಟ್ಟುಕೊಂಡಿರಿ. ಎಲ್ಲಾ ವಿವರಗಳ ಬಗ್ಗೆ ಮಾಹಿತಿ
  • ನಿಯಮ 32 ರನ್ವಯ ಪದೋನ್ನತಿ ಹೊಂದಿ ಸ್ವತಂತ್ರ ಪ್ರಭಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ /ನೌಕರರುಗಳು, ತಮ್ಮ ಮೂಲ ವೃಂದದ ಜ್ಯೇಷ್ಟತಾ ಸಂಖ್ಯೆಯನ್ನು ಹಾಗು ನಿಯಮ 42 ರನ್ವಯ ಪದೋನ್ನತಿ ಹೊಂದಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ /ನೌಕರರುಗಳು ಪ್ರಸ್ತುತ ವೃಂದದ ಹುದ್ದೆಯ ಜ್ಯೇಷ್ಟತಾ ಸಂಖ್ಯೆಯನ್ನು ನಮೂದಿಸುವುದು
  • ಎಲ್ಲಾ ವಿವರಗಳನ್ನು ಸೇವಾ ಪುಸ್ತಕದಲ್ಲಿ ಇರುವ ಮಾಹಿತಿಯಂತೆ ನೀಡತಕ್ಕದ್ದು

ವಿಶೇಷ ಸೂಚನೆ:

  • ಆನ್ ಲೈನ್ ಮುಖಾಂತರ ಸಲ್ಲಿಸಲಾದ ಅರ್ಜಿ / ಇಚ್ಛಾಪತ್ರಗಳನ್ನು ಮಾತ್ರ ಪರಿಗಣಿಸಲಾಗುವುದು. ವೈಯಕ್ತಿಕ/ಭೌತಿಕವಾಗಿ ಸಲ್ಲಿಸಲಾದ ಯಾವುದೇ ಅಭಿಮತ/ಇಚ್ಛಾಪತ್ರದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
  • ಪ್ರತಿಯೊಬ್ಬರೂ ಮೊದಲಿಗೆ ಆನ್ ಲೈನ್ ನಲ್ಲಿ ನೋಂದಣಿ ಮಾಡಿ, ಲಾಗಿನ್ ಆಗಬೇಕು. ಅದರ ವಿವರಗಳನ್ನು ಕೆಳಗೆ ನೀಡಲಾಗಿದೆ. ನಿಮ್ಮ ಲಾಗಿನ್ ಮಾಹಿತಿಯನ್ನು ಜೋಪಾನವಾಗಿ ಇರಿಸಿಕೊಳ್ಳಿ
  • ಅರ್ಜಿಯನ್ನು ಅಂತಿಮವಾಗಿ ಸಲ್ಲಿಸುವ ಮೊದಲು, ಭರ್ತಿ ಮಾಡಿದ ಅರ್ಜಿಯ ಡ್ರಾಫ್ಟ್ ವೀಕ್ಷಿಸುವ ಸೌಲಭ್ಯವನ್ನು ನೀಡಲಾಗಿದೆ.
  • ನೀವು ಭರ್ತಿ ಮಾಡಿ ಸಲ್ಲಿಸುವ ಅರ್ಜಿ ನಮೂನೆಯ ಪ್ರತಿಯನ್ನು ನಿಮ್ಮ ಇ-ಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು.
  • ನೀವು ಭರ್ತಿ ಮಾಡಿದ ಅರ್ಜಿಯಲ್ಲಿನ ಯಾವುದೇ ಮಾಹಿತಿಯನ್ನು ತಿದ್ದಬೇಕಾಗಿದ್ದಲ್ಲಿ, ಮತ್ತೊಮ್ಮೆ ಲಾಗಿನ್ ಆಗಿ, ನಿಮ್ಮ ಹಿಂದಿನ ಮಾಹಿತಿಯನ್ನು ಸಂಪೂರ್ಣವಾಗಿ ಅಳಿಸಿ ( ಡಿಲೀಟ್ ಮಾಡಿ) ಹೊಸದಾಗಿ ಅರ್ಜಿಯನ್ನು ಸಲ್ಲಿಸಬೇಕು .
  • ಯಾವುದೇ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಈ ಕೆಳಕಂಡ ಇಮೇಲ್ ವಿಳಾಸಕ್ಕೆ minorirrigationwillingness@gmail.com ಕಳುಹಿಸಿ
  • ನೀವು ನೀಡಿದ ಮಾಹಿತಿಗೆ ನೀವೇ ಸಂಪೂರ್ಣ ಜವಾಬ್ದಾರರು. ಆದ್ದರಿಂದ, ಅರ್ಜಿ ಭರ್ತಿ ಮಾಡಲು ಪ್ರಾರಂಭಿಸುವ ಮೊದಲು ಎಲ್ಲಾ ವಿವರಗಳನ್ನು ನಿಮ್ಮ ಬಳಿ ಇರಿಸಿಕೊಂಡ ನಂತರ ಅರ್ಜಿಯನ್ನು ತುಂಬುವುದು.
ಮಾಹಿತಿ ಸಲ್ಲಿಸುವುದು - ವೀಡಿಯೊ

ಮಾಹಿತಿ ಸಲ್ಲಿಸುವುದು - ಸಹಾಯ - ಸೂಚನೆ

  

ಅರ್ಜಿ ತುಂಬುವ ಮುನ್ನ ಕಡ್ಡಾಯವಾಗಿ ನಿಮ್ಮ ಬಳಿ ಇರಿಸಿಕೊಳ್ಳಬೇಕಾದ ಎಲ್ಲಾ ವಿವರಗಳ ಬಗ್ಗೆ ಮಾಹಿತಿಗಾಗಿ -

ಮಾರ್ಗಸೂಚಿಗಳು/ನಿಬಂಧನೆಗಳು

ಲೋಕೋಪಯೋಗಿ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆಯಿಂದ ನೇಮಕಾತಿ ಹೊಂದಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಲ್ಲಿ ಶಾಶ್ವತವಾಗಿ ವಿಲೀನಾತಿ ಹೊಂದಲು ಆಸಕ್ತಿ ಹೊಂದಿರುವವರು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅದಕ್ಕೆ ಅನುಗುಣವಾಗಿ ಎಲ್ಲಾ ವಿವರಗಳನ್ನು ಒದಗಿಸುವ ಮೂಲಕ ತಮ್ಮ ಇಚ್ಛೆಯನ್ನು ಸಲ್ಲಿಸಬಹುದು.

ಕೆಳಗಡೆ ನೀಡಲಾಗಿರುವ ಸೂಚನೆಗಳನ್ನು ಗಮನವಿಟ್ಟು ಓದಿ

  • ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿರುವ ಅಭಿಮತ ಪತ್ರಗಳನ್ನು ಮಾತ್ರ ಪರಿಗಣಿಸಲಾಗುತ್ತದೆ.
  • ಅಂತಿಮ ನಿರ್ಧಾರದ ಹಕ್ಕುಗಳು / ನ್ಯಾಯವ್ಯಾಪ್ತಿಯ ಅಧಿಕಾರವು ಎಲ್ಲಾ ಉದ್ದೇಶಗಳಿಗಾಗಿ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ.
ಮಾಹಿತಿ ಸಲ್ಲಿಸುವುದು

ಇಚ್ಛೆಯನ್ನು ಸಲ್ಲಿಸುವ ಮೊದಲು ದಯವಿಟ್ಟು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ವೃಂದ ಮತ್ತು ನೇಮಕಾತಿ ದಾಖಲೆಯನ್ನು ಪರಿಶೀಲಿಸಿ. ಇಲ್ಲಿ ಕ್ಲಿಕ್ ಮಾಡಿ.

ಮೊದಲನೆಯ ಹೆಜ್ಜೆಯಾಗಿ ಆನ್ ಲೈನ್ ನಲ್ಲಿ ನೋಂದಣಿ ಮಾಡಿ, ಲಾಗಿನ್ ಆಗಬೇಕು. ಎಲ್ಲಾ ವಿವರಗಳನ್ನು(ಕನ್ನಡ ಮತ್ತು ಇಂಗ್ಲಿಷ್ - ಎರಡೂ ಭಾಷೆಯಲ್ಲಿ) ಅರ್ಜಿ ಭರ್ತಿ ಮಾಡಲು ಪ್ರಾರಂಭಿಸುವ ಮೊದಲು ನಿಮ್ಮ ಬಳಿ ಸಿದ್ಧಮಾಡಿಟ್ಟುಕೊಂಡಿರಿ